ಚಾಮರಾಜನಗರ : ಸಚಿವ ಸೋಮಣ್ಣ ವಿರುದ್ಧ ಮತ್ತೇ ಗೋ ಬ್ಯಾಕ್ ಸೋಮಣ್ಣ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಘಟನೆ ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಇದೇ 26 ಇಲ್ಲವೇ 27 ಕ್ಕೆ ಸಚಿವ ಸೋಮಣ್ಣ ಗ್ರಾಮದ ದೇಗುಲಕ್ಕೆ ಬಂದು ಕೊಟ್ಟ ಮಾತಿನಂತೆ ರಥ ನಿರ್ಮಿಸಿಕೊಡಬೇಕು ಇಲ್ಲದಿದ್ದರೇ ಗೋ ಬ್ಯಾಕ್ ಸೋಮಣ್ಣ ಹೋರಾಟ ಮಾಡುತ್ತೇವೆ‌. ಜೊತೆಗೆ, ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಗ್ರಾಮದ ಮುಖಂಡರುಗಳು ಎಚ್ಚರಿಕೆ ಕೊಟ್ಟಿದ್ದಾರೆ. 


ಇದನ್ನೂ ಓದಿ : Transport Employees Strike : ಇಂದು ಸಾರಿಗೆ ನೌಕರರ ಮುಷ್ಕರವಿಲ್ಲ : ಕರ್ನಾಟಕ ಹೈಕೋರ್ಟ್ ತಡೆ


ಯಾಕೆ ಈ ಹೋರಾಟ?


ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ 400 ವರ್ಷ ಪುರಾತನವಾದ ವೀರಭದ್ರೇಶ್ವರ ಸ್ವಾಮಿ ದೇಗುಲವಿದೆ. ಈ ಐತಿಹಾಸಿಕ ದೇವಾಲಯ ಶಿಥಿಲಗೊಂಡಿದ್ದು ರಥವೂ ಕೂಡ ಹಾಳಾಗಿದೆ. ಗ್ರಾಮಕ್ಕೆ ಸಚಿವ ಸೋಮಣ್ಣ ಬಂದಿದ್ದ ವೇಳೆ ದೇಗುಲ ಜೀರ್ಣೋದ್ಧಾರ ಮಾಡಲು ಕ್ರಮ ವಹಿಸುತ್ತೇನೆ ಜೊತೆಗೆ ರಥ ಮಾಡಿಸಿಕೊಡುತ್ತೇನೆ ಎಂದು ಸೋಮಣ್ಣ ಭರವಸೆ ಕೊಟ್ಟಿದ್ದರು.


ಆದರೆ, ಸುತ್ತಮುತ್ತಲಿನ ಗ್ರಾಮದ ಒಟ್ಟು 24 ಕೋಮುಗಳ ಮುಖಂಡರು ಸೋಮಣ್ಣ ಅವರನ್ನು ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವೇಳೆ ಅಸೌಜನ್ಯದಿಂದ ನಡೆದುಕೊಂಡು ತಿರಸ್ಕಾರದಿಂದ ಕಂಡರು ಎಂಬುದು ಗ್ರಾಮಸ್ಥರ ಸಿಟ್ಟಾಗಿದೆ‌. ಸೋಮಣ್ಣ ನಡೆ ಖಂಡಿಸಿ ಗ್ರಾಮದ ಮುಖಂಡರುಗಳು ಸಭೆ ಸೇರಿ ನಿರ್ಣಯ ಕೈಗೊಂಡಿದ್ದು ಇದೇ 26 ಇಲ್ಲವೇ 27ಕ್ಕೆ ಸೋಮಣ್ಣ ದೇವಾಲಯಕ್ಕೆ ಬಂದು ಭರವಸೆ ಹಾಗೂ ಅವರ ಅಭಿಪ್ರಾಯ ತಿಳಿಸಬೇಕು, ಇಲ್ಲದಿದ್ದರೇ ಗೋ ಬ್ಯಾಕ್ ಸೋಮಷ್ಣ ಹೋರಾಟ ಮಾಡುತ್ತೇವೆ ಎಂದು ಸಭೆಗೆ ಬಂದಿದ್ದ ಸೋಮಣ್ಣ ಅವರ ವಿಶೇಷಾಧಿಕಾರಿ ಸ್ವಾಮಿ ಅವರಿಗೆ ಎಚ್ಚರಿಸಿದ್ದಾರೆ. 


ಇನ್ನು,, ಸಭೆಯಲ್ಲಿ ದೇವಾಲಯ ಸಮಿತಿಯ ಉಪಾಧ್ಯಕ್ಷ ಮಹಾದೇವಸ್ವಾಮಿ ಮಾತನಾಡಿ, ಗಂಟೆಗಟ್ಟಲೆ ಕಾದು ಹತ್ತಾರು ಮುಖಂಡರು ತೆರಳಿದ ವೇಳೆ ತಿರಸ್ಕಾರದಿಂದ ಕಂಡರು, ನಾವು ವೈಯಕ್ತಿಕ ಕಾರಣದಿಂದ ಸಚಿವರನ್ನು ಭೇಟಿಯಾಗಿಲ್ಲ ಹತ್ತಾರು ಗ್ರಾಮಗಳ ಆರಾಧ್ಯ ದೈವದ ಅಭಿವೃದ್ಧಿಗೆ ತೆರಳಿದ್ದೆವು ಎಂದು ಸಭೆಯಲ್ಲೇ ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದರು. 


ಇದನ್ನೂ ಓದಿ : Chamarajanagar : ನೀರಿನಲ್ಲಿ ಮುಳುಗುತ್ತಿದ್ದ ಮರಿ ಆನೆ ಕೊನೆಗೂ ತಾಯಿ ಮಡಿಲಿಗೆ!


ಇನ್ನು, ಸೋಮಣ್ಣ ವಿಶೇಷ ಅಧಿಕಾರಿ ಸ್ವಾಮಿ ಗ್ರಾಮಕ್ಕೆ ಬಂದು ಪ್ರತಿಭಟಿಸಬಾರದೆಂಬ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಇಂದು ಹಮ್ಮಿಕೊಂಡಿದ್ದ ಗೋ ಬ್ಯಾಕ್ ಸೋಮಣ್ಣ ಪ್ರತಿಭಟನೆ ಕೈಬಿಟ್ಟು 26-27 ಗಡವು ಕೊಟ್ಟಿದ್ದಾರೆ. 


26 ಇಲ್ಲವೇ 27ಕ್ಕೆ ಸೋಮಣ್ಣ ಜಿಲ್ಲೆಗೆ ಬರಲಿದ್ದು ಅಂದು ಏನಾಗುವುದೋ ಕಾದು ನೋಡಬೇಕಿದೆ, ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ವಿಜಯೇಂದ್ರಗೆ ಚುನಾವಣಾ ಉಸ್ತುವಾರಿ ಕೊಡಬೇಕು, ಸೋಮಣ್ಣ ಅವರಿಗೆ ಉಸ್ತುವಾರಿ, ಟಿಕೆಟ್ ಯಾವುದನ್ನು ಕೊಡಬಾರದು, ಕೊಟ್ಟರೇ ಗೋ ಬ್ಯಾಕ್ ಸೋಮಣ್ಣ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.